Film - Godhi Banna Saadharana mykattu
Singer - Siddhanth (Male version), Sharanya Gopinath (Female version)
Music - Charan raj
Lyrics - Rakshith Shetty
ನಾ ಈ ಸಂಜೆಗೆ ಆ ಬಾನನು
ತಾರೆ ಜೊತೆ ಸೇರಿ ಅಲಂಕರಿಸಲೇ
ನೀ ಮರೆತಿರುವ ಕಥೆಯೊಂದನು
ನೆನಪಿನ ಬುತ್ತಿಯಲಿ ಹುಡುಕಿ ಬಿಡಿಸಿ ನಾ ಹೇಳಲೇ
ಗೋಡೆಯ ಮೇಲೆ ನೀ ಬರೆದಿರುವ
ಅಂಗೈಯಿನ ಗುರುತಿನಲಿ ರೇಖೆಗಳು
ನೀ ನಡೆವ ದಾರಿಯನು ಅನುಕರಿಸಿದೆ
ಆ ಒಗಟಿನ ಜಾಲವ ನಾ ಬಿಡಿಸಲೇ
ನೀ ಕಡಲ ಜೀವ, ನಾ ಅಲೆಯ ಭಾವ
ನಿನ್ನಲ್ಲೇ ನಾನಿರುವೆ, ನೀ ನನ್ನೆಲ್ಲಿ ಹುಡುಕುವೆ
ಜೋರಾಗಿ ಕೂಗೊಮ್ಮೆ, ನಾ ನಿನ್ನೊಳ ಪ್ರತಿಧ್ವನಿಸುವೆ
ನಾ ಈ ಸಂಜೆಗೆ ಆ ಬಾನನು
ತಾರೆ ಜೊತೆ ಸೇರಿ ಅಲಂಕರಿಸಲೇ
ಗೋಡೆಯ ಮೇಲೆ ನೀ ಬರೆದಿರುವ
ಅಂಗೈಯಿನ ಗುರುತಿನಲಿ ರೇಖೆಗಳು
ನೀ ನಡೆವ ದಾರಿಯನು ಅನುಕರಿಸಿದೆ
ಆ ಒಗಟಿನ ಜಾಲವ ನಾ ಬಿಡಿಸಲೇ
Naa ee sanjege aa baananu
taare jothe seri alankarisale
Nee marethiruva katheyondanu
Nenapina buthiyali huduki bidisi naa helale
Godeya mele nee barediruva
Angaiyina gurutinali rekhegalu
Nee nadeva daariyanu anukariside
Aa ogatina jaalava naa bidisale
Nee kadala jeeva, Naa aleya bhaava
Ninnalle naaniruve, Nee nannelli hudukuve
Joraagi koogomme, naa ninnola prathidhwanisuve
Naa ee sanjege aa baananu
Taare jothe seri alankarisale
Godeya mele nee barediruva
Angaiyina gurutinali rekhegalu
Nee nadeva daariyanu anukariside
Aa ogatina jaalava naa bidisale
Awesome... Thanks and very thoughtful to write in English... That's one way to promote Kannada.
ReplyDeleteThumba thanks share madidakke
ReplyDeletebeautiful language.... thanks for your efforts... I use your site for singing...
ReplyDeleteKanna muchchi from ulidavaru kandante please
ReplyDeleteAwesome work... One of the many songs that makes me feel so proud of kannada.
ReplyDeleteHats off to rakshith Shetty the lyricist of this song. He has bundle of talents with him. We want such people in kfi
ReplyDeleteI have altered this lyrics .........written in a 3rd person perspective.
ReplyDeleteAltered version of "Naa ee sanjege"
ಜನರೇ ಇಲ್ಲದ ಸಂತೆಗೆ ಕರೆದೊಯ್ಯುವ
ಪ್ರಯತ್ನಕ್ಕೆ ಮುನ್ನುಡಿ ನಾ ಬರೆಯಲೇ
ನೀ ಬದುಕಿರುವ ಆ ಬದುಕಿಗೆ
ನಿಲುಗನ್ನಡಿ ನಾನಾಗಲೇ
ಮತ್ತೆ ಮತ್ತೇ ಮರುಕಳಿಸಲಿ
ಮರೆತಿರುವ ಕಹಿ ವಾರಗಳು
ಮೆದುಳಿನ ಧರೆಗಿಳಿಯಲಿ
ಕಳೆದುಹೋದ ಹಳೆ ಗರಿಕೆಯ ಕ್ಷಣಗಳು
ಅನುಮತಿ ನೀಡಿದರೆ
ನಿನ ಪಾತ್ರದಲೆ ನಾ ಜೀವಿಸುವೆ
ಆಂತರ್ಯದಲೆ ಬೆರೆತಿರುವ ಕ್ಷಣಗಳಿಗೆ
ಬೊಗಸೆ ರಂಗನು ಚೆಲ್ಲುವೆ......